ಮಂಜೇಶ್ವರ ಫೆಬ್ರವರಿ 3: ಕುಂಬಳೆ ರೈಲು ನಿಲ್ದಾಣ ರಸ್ತೆಯ ಬಳಿ ಕಾರ್ಯಾಚರಿಸುವ ಅಂಗಡಿಯೊಂದು ಬೆಂಕಿಗಾಹುತಿಯಾಗಿದ್ದು ಸುಮಾರು ೨ ಲಕ್ಷ ರೂ ಮೌಲ್ಯದ ಸಾಮಗ್ರಿಗಳು ಉರಿದು ನಾಶವಾದ ಘಟನೆ ಇಂದು ಮುಂಜಾನೆ ನಡೆದಿದೆ.
ಇಂದು ಮುಂಜಾನೆ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿಯಿಂದಾಗಿ ಅಂಗಡಿ ಉರಿಯುತ್ತಿದ್ದುದನ್ನು ಕಂಡ ದಾರಿಹೋಕರು ಕಾಸರಗೋಡು ಅಗ್ನಿಶಾಮಕ ಧಳಕ್ಕೆ ಮಾಹಿತಿ ನೀಡಿದ್ದು ಕಾಸರಗೋಡಿನಿಂದ ತಲುಪಿದ ಅಗ್ನಿಶಾಮಕ ದಳದ ಸಹಾಯದಿಂದ ಬೆಂಕಿಯನ್ನು ನಂದಿಸಲಾಯಿತು. ಈ ಬಗ್ಗೆ ಅಂಗಡಿ ಮಾಲಕ ಅಬ್ದುಲ್ಲ ಕುಂಬಳೆ ಠಾಣೆಯಲ್ಲಿ ದೂರು ನೀಡಿದ್ದಾರೆ.
-ಆರಿಫ್ ಮಚ್ಚಂಪಾಡಿ, ಮಂಜೇಶ್ವರ